Advertisement

ಅಗಸ್ಟ್ 31, ಉದ್ಯಾವರದಲ್ಲಿ 'ಮಂಜಣ್ಣ ನೆನಪು ಹದಿಮೂರು' ಕಾರ್ಯಕ್ರಮ

ಉದ್ಯಾವರ: 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಗ್ರಾಮದ ಅಭಿವೃದ್ಧಿ ಹರಿಕಾರ , ಸಾಮಾಜಿಕ ಕಾರ್ಯಕರ್ತ ,ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ಮಂಜುನಾಥ ಉದ್ಯಾವರ ಅವರ ಸಂಸ್ಮರಣ ಕಾರ್ಯಕ್ರಮ' ಮಂಜಣ್ಣ ನೆನಪು ಹದಿಮೂರು' ತಾ. 31.08.2025 ಭಾನುವಾರ ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಜರಗಲಿದೆ.

ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ ಗಂಟೆ 1.00 ತನಕ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಕಾಪು ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಕಾಪು ದಿವಾಕರ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಸುಕುಮಾರ್ ಪಡುಬಿದ್ರಿ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಕೀರ್ತಿ ಶೆಟ್ಟಿ ಅಂಬಲಪಾಡಿ ಭಾಗವಹಿಸಲಿ ಇರುವರು

ಸಂಜೆ ಗಂಟೆ 5.00 ಕ್ಕೆ ಜರಗುವ ಸಂಸ್ಮರಣಾ ಸಭಾ ಕಾರ್ಯಕ್ರಮ , ವೈದ್ಯಕೀಯ ನೆರವು ವಿತರಣೆ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಮಲ್ಯಾಡಿ ಶ್ರೀಶಿವರಾಮ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ್ ಹೇರೂರು ಮತ್ತು ಉದ್ಯಾವರ ಹಿಂದೂ ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ಗಣಪತಿ ಕಾರಂತ್ ಭಾಗವಹಿಸಲಿರುವರು

ನಂತರ ಪ್ರಜ್ಞಾನಂ ಟ್ರಸ್ಟ್ ಉಡುಪಿ ಪ್ರಸ್ತುತಿಯಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸುವ ಏಕವ್ಯಕ್ತಿ ರಂಗ ಪ್ರಯೋಗ ನಾಟ್ಯ ರಾಣಿ ಶಾಂತಲೆಯ ಆತ್ಮವೃತ್ತ 'ಹೆಜ್ಜೆಗೊಲಿದ ಬೆಳಕು' ಪ್ರದರ್ಶನಗೊಳ್ಳಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಮತ್ತು ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions