Advertisement

ಎ.ಪಿ.ಎಂ.ಸಿ ಮಾರುಕಟ್ಟೆ ಹಾನಿ: ಪ್ರತಿಭಟನೆಗೆ ತಡೆ – ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ

ಉಡುಪಿ ಎ.ಪಿ.ಎಂ.ಸಿ ಪ್ರಾಂಗಣದಲ್ಲಿರುವ ನಿತ್ಯ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಿರುವ ಜಾಗದಲ್ಲಿರುವ ಬೆಲೆಬಾಳುವ ಮರಗಳು, ಶೆಡ್‌ಗಳು ಮತ್ತು ಇಂಟರ್‌ಲಾಕ್ ನ್ನು ಧ್ವಂಸ ಮಾಡಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆಗೆ ಅನುಮತಿ ನೀಡದ ಜಿಲ್ಲಾಡಳಿತ ವಿರುದ್ದ ಎಪಿಎಮ್‌ಸಿ ರಕ್ಷಣಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿಂದಿನ ಸರಕಾರದ ಅನುದಾನದಲ್ಲಿ ನಿರ್ಮಿಸಿದ ಶೆಡ್ ಹಾಗೂ ಇಂಟರ್ ಲಾಕ್ ಧ್ವಂಸಗೊಳಿಸಿ ಲಕ್ಷಾಂತರ ರೂ. ಹಾನಿ ಮಾಡಿದ್ದರ ವಿರುದ್ಧ ಕ್ರಮಕೈಗೊಳ್ಳುವಂತೆ ಫೆ. 26 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಸತ್ಯಾಗ್ರಹಕಟ್ಟೆಯಲ್ಲಿ ಸಾವಿರಾರು ರೈತರು ಪ್ರತಿಭಟಿಸುವ ಬಗ್ಗೆ ರಕ್ಷಣಾ ಸಮಿತಿ ನಿರ್ಧರಿಸಿತ್ತು.

ಆದರೆ ಜಿಲ್ಲಾಡಳಿತ ನಮ್ಮ ಪ್ರತಿಭಟನೆಗೆ ಹೆದರಿ ಕೊನೆಕ್ಷಣದಲ್ಲಿ ಅನುಮತಿ ನಿರಾಕರಿಸಿ, ಪ್ರಜಾಪ್ರಭುತ್ವದ ನಮ್ಮ ಪ್ರತಿಭಟಿಸುವ ಹಕ್ಕು ಕಸಿದುಕೊಂಡಿದೆ ಎಂದು ಎಪಿಎಮ್‌ಸಿ ರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದ್ದಾರೆ.

ನಮ್ಮ ಬೇಡಿಕೆಗಳು: ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು

ಮರ ಕಡಿದ ಜಾಗದಲ್ಲಿ ಪುನಃ ಗಿಡ ನೆಟ್ಟು ಪ್ರಕೃತಿಯನ್ನು ರಕ್ಷಿಸಬೇಕು.

ಅಕ್ರಮವಾಗಿ ಉಡುಪಿ ಎ.ಪಿ.ಎಂ.ಸಿ ಯ ಜಾಗ ಮಾರಾಟ ಮಾಡಿದ ಅಧಿಕಾರಿಗಳ ವಿರುದ್ಧ ಸರಕಾರ ತನಿಖಾ ಸಮಿತಿ ನೇಮಿಸಬೇಕು.

ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದೆ ಸಾವಿರಾರು ರೈತರು, ಅನ್ಯಾಯಕ್ಕೆ ಒಳಗಾದ ದಲಿತರು, ವರ್ತಕರ ಜೊತೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಬಗ್ಗೆಯೂ ಚಿಂತನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions