ಕಾರ್ಕಳ: ಅತ್ತೂರು ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವವು 2026ರ ಜನವರಿ 25ರಿಂದ 29ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಕುರಿತು ಎಲ್ಲಾ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಹೋತ್ಸವಕ್ಕೆ ಬಸಿಲಿಕಾ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಬಸಿಲಿಕಾದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ತಿಳಿಸಿದರು.
ಅವರು ಗುರುವಾರ ಕಾರ್ಕಳ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದ ಮಹೋತ್ಸವದ ವಿಷಯ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ” ಆಗಿದ್ದು, ಜನವರಿ 16ರಿಂದ 24ರವರೆಗೆ ನವದಿನಗಳ ಪ್ರಾರ್ಥನೆ ನಡೆಯಲಿದೆ ಎಂದರು. ಜನವರಿ 24ರಂದು ಬೆಳಿಗ್ಗೆ 9ಕ್ಕೆ ಆರಾಧನೆ ಹಾಗೂ 9.30ಕ್ಕೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ.
ಜನವರಿ 25ರಂದು ಸಂಜೆ 3 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ. ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡದಲ್ಲಿ 9 ಸೇರಿದಂತೆ ಒಟ್ಟು 45 ದಿವ್ಯ ಪೂಜೆಗಳು ನಡೆಯಲಿದ್ದು, ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು ದಿವ್ಯ ಪೂಜೆ ಅರ್ಪಿಸಲಿದ್ದಾರೆ.
ಭಕ್ತರ ಸುರಕ್ಷತೆಗಾಗಿ ಬಸಿಲಿಕದ ಒಳಭಾಗ ಹಾಗೂ ವಠಾರದಲ್ಲಿ 72 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಪಾಪನಿವೇದನೆ, ಹರಕೆ ಸಲ್ಲಿಕೆ, ಪಾರ್ಕಿಂಗ್ ಹಾಗೂ ಸಂಚಾರ ವ್ಯವಸ್ಥೆಗಳನ್ನು ಸೂಕ್ತವಾಗಿ ರೂಪಿಸಲಾಗಿದೆ. ಬಸಿಲಿಕದ ವಠಾರದಲ್ಲಿ ಅಧಿಕೃತ ಸ್ಟಾಲ್‌ಗಳಲ್ಲಿ ಮಾತ್ರ ಮೊಂಬತ್ತಿ ಮಾರಾಟಕ್ಕೆ ಅವಕಾಶವಿದ್ದು, ಅನಧಿಕೃತ ಮಾರಾಟ ನಿಷೇಧಿಸಲಾಗಿದೆ.
ಜನವರಿ 29ರಂದು ಸಂಜೆ 6 ಗಂಟೆಯ ಬಲಿಪೂಜೆಯ ನಂತರ ಬಸಿಲಿಕಾ ವಠಾರದಲ್ಲಿ ಜಿ.ಕೆ. ಶ್ರೀನಿವಾಸ್ ಸಾಲ್ಯಾನ್ ವಿರಚಿತ “ಸತ್ಯ ದರ್ಶನ” ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions