Advertisement

ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ, ಅಂಬೇಡ್ಕರ್ ಯುವ ಸೇನೆ ಖಂಡನೆ

ಧರ್ಮಸ್ಥಳದಲ್ಲಿ ಯೂಟ್ಯೂಬರ್ಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದನ್ನು ಅಂಬೇಡ್ಕರ್ ಯುವ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಯವರು ತೀರ್ವವಾಗಿ ಖಂಡಿಸಿದ್ದಾರೆ.

ರವಿವಾರ ಹಲ್ಲೆಗೊಳಗಾದ ಯೂಟ್ಯೂಬರ್‌ಗಳನ್ನು ಬೆಳ್ತಂಗಡಿಯಲ್ಲಿ ಭೇಟಿಯಾಗಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಜೊತೆಗೆ ಮಾಧ್ಯಮ ರಂಗದ ಮೇಲೆ ಗೂಂಡಾಗಿರಿ ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.

ಸಮಾಜದ ಅಂಕು ಡೊಂಕನ್ನು ದಿಟ್ಟ ಹಾಗೂ ನೇರವಾಗಿ ವರದಿ ಮಾಡುವ ಯೂಟ್ಯೂಬರ್ಗಳ ಮೇಲೆ ದೌರ್ಜನ್ಯ ನಡೆಸುವ ಮೂಲಕ ಪ್ರಕರಣವನ್ನು ದಿಕ್ಕು ತಪ್ಪಿಸುವ ಷಡ್ಯಂತ್ರ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಉದ್ದೇಶಪೂರ್ವಕವಾಗಿ ಪೂರ್ವಯೋಜಿತವಾಗಿ ಈ ಹಲ್ಲೆ ಕೇವಲ ಯೂಟ್ಯೂಬರ್ಗಳ ಮೇಲೆ ಮಾಡಿದ್ದಲ್ಲ ಸಂವಿಧಾನದ ಹಕ್ಕನ್ನು ಎತ್ತಿ ಹಿಡಿಯುವ ಎಲ್ಲರನ್ನೂ ಬೆದರಿಸುವ ತಂತ್ರ ಈ ಘಟನೆ ಸಾಬೀತು ಪಡಿಸುತ್ತದೆ.

ಹಲ್ಲೆಗೊಳಗಾದವರನ್ನು ಭೇಟಿ ನೀಡಿದ ನಿಯೋಗದಲ್ಲಿ ಅಂಬೇಡ್ಕರ್ ಯುವ ಸೇನೆಯ ನಿಕಟಪೂರ್ವ ಅಧ್ಯಕ್ಷ ಹರೀಶ್ ಸಾಲ್ಯಾನ್, ಪದಾಧಿಕಾರಿಗಳಾದ ರವಿರಾಜ್ ಲಕ್ಷ್ಮೀನಗರ, ಸತೀಶ್ ಕಪ್ಪೆಟ್ಟು, ವಿಶ್ವನಾಥ್ ಹಾಳೆಕಟ್ಟೆ, ಅಂಬೇಡ್ಕರ್ ಸೇನೆ (ರಿ.) ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ಕ.ದ.ಸಂ.ಸ ಜೈ ಭೀಮ್ ನೀಲಿ ಪಡೆ ಪ್ರಧಾನ ಸಂಚಾಲಕ ಜಗದೀಶ್ ಗಂಗೊಳ್ಳಿ, ಬೀಮ್ ಆರ್ಮಿ, ಚಿಕ್ಕಮಂಗಳೂರು ಜಿಲ್ಲಾ ಸಂಚಾಲಕರು ಜಗದೀಶ್ ಚಿಕ್ಕಮಂಗಳೂರು, ಅಂಬೇಡ್ಕರ್ ಸೇನೆ, ಕಾರ್ಕಳ ಹರೀಶ್ ಕೊಂಡಾಡಿ, ಗಣೇಶ್ ಕೌಡೂರು, ಕಿರಣ್ ಕೌಡೂರು, ಸುಧೀರ್ ಬೈಲೂರು, ಸಂಜೀವ ಕೌಡೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions