ಮೆಡಿಕಲ್ ಓದುವ ಆಶಯದಂತೆ ಬಡತನದ ನಡುವೆ ಉತ್ತಮ ಶಿಕ್ಷಣದ ಕನಸು ಕಂಡಿದ್ದ ಕಾರ್ಕಳ ತಾಲೂಕಿನ ರೆಂಜಾಳದ ವಿನುತಾ ಸರಕಾರಿ ಹಾಸ್ಟೆಲ್‌ನಲ್ಲಿ ಓದಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮುಖ್ಯಮಂತ್ರಿಗಳ ವಿದ್ಯಾರ್ಥಿ ವೇತನಕ್ಕೂ ಭಾಜನಳಾಗಿದ್ದಾಳೆ .ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಪಡೆದ ರಾಜ್ಯದ ಟಾಪ್ 15 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಸಿಎಂ ಅವಾರ್ಡ್ 1 ಲಕ್ಷ ರೂ. ವೇತನ ನೀಡಲಾಯಿತು.
ಕಾರ್ಕಳ ರೆಂಜಾಳ ಮೂಲದ ಲೀಲಾ ಮತ್ತು ಚಿಂಗ ದಂಪತಿಯ ಪುತ್ರಿಯಾಗಿರುವ ವಿನುತಾ ಒಂದು ಲಕ್ಷ ರೂ ವಿದ್ಯಾರ್ಥಿ ವೇತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಪಡೆದರು. ಮಿಯಾರು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದುಕೊಂಡು ಪಿಯುಸಿ ತೇರ್ಗಡೆ ಹೊಂದಿದ್ದ ವಿನುತಾ ಶೇ.96 ಅಂಕ ಪಡೆದು ಪ್ರಥಮ ಸ್ಥಾನಿಯಾಗಿದ್ದರು. ಪ್ರಸ್ತುತ ಮಂಗಳೂರಿನ ಶಾರದಾ ಯೋಗ ಆ್ಯಂಡ್ ನ್ಯಾಚುರೋಪತಿ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ದಾಖಲಾಗಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions