Advertisement

ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ -ಅದಮಾರುಶ್ರೀ

ನೀರು ವಿದ್ಯುತ್ ಗೆ ಸರಕಾರಕ್ಕೆ ತೆರಿಗೆ ನೀಡುವ ನಾವು ಜಗತ್ತಿಗೆ ವಾಯು ಬೆಳಕು ನೀರು ನೀಡುವ ದೇವರಿಗೆ ಕೃತಜ್ಞರಾಗಿರಬೇಕು. ಅಗತ್ಯವಿದ್ದವರಿಗೆ ಅಗತ್ಯವಿರುವುದನ್ನು ಅಗತ್ಯವಿದ್ದ ಸಮಯದಲ್ಲಿ ನೀಡುವುದೇ ನಾವು ದೇವರಿಗೆ ನೀಡುವ ತೆರಿಗೆ. ಈ ಸಂಸ್ಕಾರವನ್ನು‌ ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿದರೆ ಬಲಿಷ್ಠ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಸೆ.೨೦ರಿಂದ ನಾಲ್ಕು ದಿನಗಳ ಕಾಲ‌ ನಡೆಯಲಿರುವ ರಾಜ್ಯಮಟ್ಟದ ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಭಾರತ್ ಸೌಟ್ಸ್ ಮತ್ತು ಗೈಡ್ಸ್, ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ. ಆರ್ ಸಿಂದಿಯ ಮಾತನಾಡಿ, ಉಡುಪಿ ವಿದ್ಯೆ ಮತ್ತು ಆಹಾರ ಒದಗಿಸುವಲ್ಲಿ ರಾಷ್ಟ್ರವ್ಯಾಪಿಯಾಗಿ ಗುರುತಿಸಿ ಕೊಂಡಿದೆ. ರಾಜ್ಯದ ವಿವಿದೆಡೆಯಿಂದ ಬಂದು ಆಚಾರ್ಯ ಮಧ್ವರ ಜನ್ಮಸ್ಥಳದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಇಲ್ಲಿನ ಸಂಸ್ಕೃತಿ ಸಂಸ್ಕಾರ ಪ್ರಭಾವಿಸುವಂತಾಗಲಿ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ, ಕಾರ್ಯದರ್ಶಿ ಆನಂದ್ ಬಿ ಅಡಿಗ, ಖಜಾಂಜಿ ಹರಿಪ್ರಸಾದ್ ರೈ, ಆನಂದತೀರ್ಥ ಟ್ರಸ್ಟ್ ನ ಉಪಾಧ್ಯಕ್ಷ ಹರಿಭಟ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್, ಮುಖ್ಯ ಆಯುಕ್ತ ಮಾಜಿ ಸಚಿವ ಪಿ.ಜಿ. ಆರ್ ಸಿಂದಿಯಾ ಅವರ ಹುಟ್ಟುಹಬ್ಬ ಆಚರಿಸಿ ಅಭಿನಂದಿಸಲಾಯಿತು. ಭಾರತ್ ಸೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು, ಆನಂದತೀರ್ಥ ವಿದ್ಯಾಲಯದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿವಿಧ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

ರಾಜ್ಯದಾದ್ಯಂತ ಸುಮಾರು 800 ವಿದಾರ್ಥಿಗಳು ಭಾಗವಹಿಸಿದ್ದರು. ಪ್ರಾಂಶುಪಾಲೆ ಡಾ. ಗೀತಾ ಶಶಿಧರ್ ಸ್ವಾಗತಿಸಿದರು. ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್ ವಂದಿಸಿದರು. ಪೂರ್ಣಿಮಾ ಉಮಾನಾಥ್ ಪ್ರಸ್ತಾಪಿಸಿದರು. ಸುಮಾ ಕಿರಣ್ ನಿರೂಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions